Jai Sri Gurudev
08265-250810, 251623. bgscollegesringeri@gmail.com

News & Events

World Environment Day 2025


CTC Camp


  ದತ್ತಿ ಉಪನ್ಯಾಸ ಕಾರ್ಯಕ್ರಮ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶೃಂಗೇರಿ   ಹಾಗೂ ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯ ಶೃಂಗೇರಿ ಇವರ ಸಹಯೋಗದಲ್ಲಿ ದಿ. ಶ್ರೀಮತಿ ಅನುಸೂಯ.ಹೆಚ್. ಕೆ ಇವರ ಸ್ಮರಣಾರ್ಥ "ದತ್ತಿ ಉಪನ್ಯಾಸ" ಕಾರ್ಯಕ್ರಮವು ಶ್ರೀ ಆದಿಚುಂಚನಗಿರಿ ಶಾಖಾ ಮಠ ಶೃಂಗೇರಿಯಲ್ಲಿ ನೆರವೇರಿತು. ಈ ಕಾರ್ಯಕ್ರಮ ದ ದಿವ್ಯಸಾನಿದ್ಯವನ್ನು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್. ರಿ.ಪ್ರಧಾನಕಾರ್ಯದರ್ಶಿಗಳಾದ ಪರಮಪೂಜ್ಯ ಶ್ರೀ ಶ್ರೀ ಪುರುಷೋತಮನಾಥ ಮಹಾಸ್ವಾಮೀಜಿ ಶ್ರೀ ಕ್ಷೇತ್ರ ಆದಿಚುಂಚನಗಿರಿ. ಆಶೀರ್ವಚನ ನೀಡಿದರು.  ಶೃಂಗೇರಿ ಶಾಖೆಯ ಪೂಜ್ಯ ಶ್ರೀ ಶ್ರೀ ಗುಣನಾಥ ಸ್ವಾಮೀಜಿ ಯವರು ಪಾವನ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಪ್ರಗತಿ ಪರ ಕೃಷಿಕರಾದ ಕಾಫಿ ತೋಟ ಶ್ರೀ ಮಲ್ಲಪ್ಪ ಹೆಗ್ಗಡೆಯವರು, ಪ್ರಾಂಶುಪಾಲರಾದ ಡಾ. ಕೆ. ಸಿ. ನಾಗೇಶ್ ರವರು, ದಿವಂಗತ ಶ್ರೀಮತಿ ಅನುಸೂಯ. ಹೆಚ್. ಕೆ. ಕುಟುಂಬ ವರ್ಗದವರು, ಬಿ. ಇ. ಡಿ ಕಾಲೇಜಿನ ಉಪನ್ಯಾಸಕರು,ಪ್ರಶಿಕ್ಷಣಾರ್ಥಿ ಗಳು ಉಪಸ್ಥಿತರಿದ್ದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೀರ್ಥಹಳ್ಳಿಯ ಉಪನ್ಯಾಸಕರಾದ ಶ್ರೀ ಗಣಪತಿ. ಹೆಚ್. ಎ. ರವರು "ಶ್ರೀ ಕುವೆಂಪು ಕೃಷಿಯಲ್ಲಿ ಕೃಷಿಜನ್ಯ ಮಲೆನಾಡು "ಎಂಬ ವಿಷಯದ ಬಗ್ಗೆ ದತ್ತಿ ಉಪನ್ಯಾಸ ನೀಡಿದರು.


Akshara Santa Dina

ದಿನಾಂಕ: 18 : 01 : 2022 ರಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶೃಂಗೇರಿ ಯಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 77 ನೇ ಜಯಂತ್ಯೋತ್ಸವ ದಿನವನ್ನು ‘ಅಕ್ಷರ ಸಂತ’ ದಿನವನ್ನಾಗಿ ಆಚರಿಸಲಾಯಿತು.


Kuvempu Birth Anniversary

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ಶೃಂಗೇರಿ. ಯಲ್ಲಿ ಜಗದಕವಿ,ಯುಗದಕವಿ,ರಾಷ್ಟ್ರ ಕವಿ ಡಾ.ಕುವೆಂಪು ರವರ ೧೧೭ ನೇ ಜನ್ಮದಿನೋತ್ಸವ ಆಚರಣಾಕಾರ್ಯಕ್ರಮವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ದಿವ್ಯಸಾನಿದ್ಯದಲ್ಲಿ ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ಪ್ರಧಾನ ಕಾರ್ಯದರ್ಶಿಗಳಾದ ಪರಮಪೂಜ್ಯ ಶ್ರೀ ಶ್ರೀ ಪುರುಷೋತ್ತಮನಂದನಾಥ ಮಹಾಸ್ವಾಮೀಜಿ,ಹಾಸನ  ಶಾಖೆಯ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಶಂಭುನಾಥಸ್ವಾಮೀಜಿ,ಚಿಕ್ಕಮಗಳೂರು ಶಾಖೆಯ ಪೂಜ್ಯ ಶ್ರೀ ಶ್ರೀ ಗುಣನಾಥಸ್ವಾಮೀಜಿಗಳು, ಶೃಂಗೇರಿ ಕ್ಷೇತ್ರದ ಶಾಸಕರಾದ ಶ್ರೀ ಟಿ.ಡಿ ರಾಜೇಗೌಡರು ಉಪಸ್ಥಿತರಿದ್ದರು.